Friday, October 21, 2011

ತ್ರಿಫಲ (ಬೆಟ್ಟದ ನಲ್ಲಿಕಾಯಿ, ತಾರೆಕಾಯಿ, ಹರಳೇಕಾಯಿ)

 

ಸಾವಿರಾರು ವರ್ಷಗಳ ಹಿಂದೆ ಆಯುರ್ವೇದದಲ್ಲಿ ಕಂಡುಹಿಡಿದ ಈ ತ್ರಿಫಲ ಚಿಕಿತ್ಸೆ ಈಗಲೂ ಪ್ರಸ್ತುತ. ಬೆಟ್ಟದ ನಲ್ಲಿಕಾಯಿ, ತಾರೆಕಾಯಿ, ಹರಳೇಕಾಯಿ, ಈ ಮೂರರ ಮಿಶ್ರಣ ದೇಹವನ್ನು, ಮನಸ್ಸನ್ನು, ಮೆದುಳನ್ನು ಶುದ್ಧವಾಗಿಡುತ್ತೆ.


ಈ ಮೂರರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಪಿತ್ತವನ್ನೂ ನಿಯಂತ್ರಿಸುವ ಶಕ್ತಿಯಿದೆ. ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಇದು ನಿಮ್ಮ ಆಯ್ಕೆಯಾಗಿರಲಿ. ಕೂದಲಿನ ಬೆಳವಣಿಗೆಯಲ್ಲೂ ತ್ರಿಫಲ ಫಲಕಾರಿ.


ಮಲಬದ್ಧತೆ, ಅಲ್ಸರ್, ಕರುಳಿನ ತೊಂದರೆ ಇವುಗಳನ್ನು ಹೇಳ ಹೆಸರಿಲ್ಲದಂತೆ ನಿವಾರಿಸುವ ಮಾಂತ್ರಿಕ ಶಕ್ತಿ ಇದರಲ್ಲಿದೆ. ತಾರೆಕಾಯಿಯಲ್ಲಿ ಜೀರ್ಣಕ್ರಿಯೆ ತೊಂದರೆ, ಗಾಲ್ ಸ್ಟೋನ್, ಹೃದಯ ಮತ್ತು ಜಠರದ ತೊಂದರೆಯನ್ನು ಒಳಗಿನಿಂದಲೇ ಗುಣಪಡಿಸುವ ಶಕ್ತಿಯಿದೆ. ಇದು ಮಾತು ಮತ್ತು ದೃಷ್ಟಿಯನ್ನೂ ವೃದ್ಧಿಸುತ್ತದೆ.


ಬೆಟ್ಟದ ನಲ್ಲಿಕಾಯಿಯಿಂದ ದೇಹ ಚೈತನ್ಯದಿಂದಿರುವುದಲ್ಲದೆ, ಕೂದಲಿನ ಸಮಸ್ಯೆ, ಕಫದ ಸಮಸ್ಯೆಯೂ ಕಡಿಮೆಯಾಗುತ್ತದೆ. ಹರಳೇಕಾಯಿ ಹೃದಯ, ಮೆದುಳನ್ನು ಹೆಚ್ಚು ಕಾಲ ಬಾಳಿಕೆ ಬರಿಸುವಂತಹ ಔಷಧೀಯ ಗಿಡವಾಗಿದೆ. ವಾತಕ್ಕೆ ಸಂಬಂಧಿಸಿದ ರೋಗವನ್ನು ತಕ್ಷಣವೇ ನಿಯಂತ್ರಣಕ್ಕೆ ತರುತ್ತದೆ. ಆದರೆ ಕೆಲವು ಕಾಲಾವಧಿಗೆ ಮಾತ್ರ ಅದನ್ನು ಉಪಯೋಗಿಸಲಾಗುತ್ತದೆ.

1 comment:

  1. Sir, Please share the details about when and how we should use Tripala on a regular basis. Is it good or bad to use it on a daily basis. How long can we use it.

    ReplyDelete