Friday, October 21, 2011

ಶಲ್ಲಕಿ




ಬೋಸ್ ವೆಲ್ಲಿಯಾ ಎನ್ನುವ ಔಷಧೀಯ ಗುಣವುಳ್ಳ ಮರವನ್ನು ಆಯುರ್ವೇದದಲ್ಲಿ ಶಲ್ಲಕಿ ಎನ್ನುತ್ತಾರೆ. ಹಲವು ಉಪಯೋಗಗಳನ್ನು ಹೊಂದಿರುವ ಈ ಮಡ್ಡಿ ಮರದಿಂದ ಆರೋಗ್ಯಕ್ಕೆ ಹಲವು ಅನುಕೂಲವನ್ನು ಹೊಂದಬಹುದು. ಅನೇಕ ದಿನಗಳಿಂದ ನಿಮ್ಮನ್ನು ಕಾಡುತ್ತಿರುವ ಕೀಲು ನೋವನ್ನು ಅತಿ ಬೇಗನೆ ಹೋಗಲಾಡಿಸುವಲ್ಲಿ ಇದು ಹೆಚ್ಚು ಉಪಯುಕ್ತ.

ಕೀಲು ನೋವಿಗೆಂದು ಮಾತ್ರೆಗಳನ್ನು ಸೇವಿಸುವ ಮಂದಿ ಇದನ್ನು ಸೇವಿಸಲು ಆರಂಭಿಸಿದರೆ ಯಾವುದೇ ಅಡ್ಡ ಪರಿಣಾಮವಿಲ್ಲದೆಯೇ ನೈಸರ್ಗಿಕವಾಗಿ ಕೀಲು ನೋವನ್ನು ನಿವಾರಿಸಿಕೊಳ್ಳಬಹುದು.

ಕೇವಲ ಕೀಲು ನೋವಷ್ಟೇ ಅಲ್ಲ, ದೇಹದಲ್ಲಿ, ಹೊಟ್ಟೆಯಲ್ಲಿ ಉಂಟಾಗುವ ಉರಿಯನ್ನೂ ಇದು ನಿವಾರಿಸುತ್ತದೆ. ಅಸ್ಥಿ ಸಂಧಿವಾತ, ಕೀಲು ವ್ಯಾಧಿ ಮತ್ತು ಇನ್ನಿತರ ನೋವುಗಳನ್ನು ಸುಲಭವಾಗಿ ಉಪಶಮನ ಮಾಡುವ ಈ ಬೋಸ್ ವೆಲ್ಲಾ ಸೇವಿಸುವುದರಿಂದ ಕೇವಲ 7 ದಿನಕ್ಕೇ ನೋವು ನಿವಾರಣೆಯಾಗುತ್ತದೆ ಎಂದು ಕೆಲವು ಅಧ್ಯಯನಗಳು ಸಾಬೀತುಪಡಿಸಿದೆ.

ಆಯುರ್ವೇದದಲ್ಲಿ ಅನೇಕ ಔಷಧೀಯ ಸಸ್ಯಗಳಿವೆ. ಆದರೆ ಈ ಏಳು ಸಸ್ಯಗಳನ್ನು ಆರೋಗ್ಯದ ಸಮಸ್ಯೆ ನೀಗಿಸಲು ಹೆಚ್ಚು ಉಪಯೋಗಿಸಲಾಗುತ್ತೆ. ಈ ಏಳೂ ಪದಾರ್ಥಗಳನ್ನು ನಿಮ್ಮ ದಿನನಿತ್ಯದ ಆಹಾರಗಳಲ್ಲಿ ಸ್ವಲ್ಪವಾದರೂ ಸೇರಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ನೀವು ನಿಶ್ಚಿಂತೆಯಾಗಿರಬಹುದು.

No comments:

Post a Comment