Friday, October 21, 2011

ಶುಂಠಿ

 

ದಿನನಿತ್ಯ ಅಡುಗೆಯಲ್ಲಿ ರುಚಿಗೆಂದು ಸೇರಿಸುವ ಶುಂಠಿಗೂ ಆರೋಗ್ಯಕ್ಕೂ ಉತ್ತಮ ನಂಟಿದೆ. ಶುಂಠಿಗೆ ಆಯುರ್ವೇದದಲ್ಲಿ ಅತ್ಯುನ್ನತ ಸ್ಥಾನವಿದೆ. ಶುಂಠಿಯ ಬೇರನ್ನು ಮನುಷ್ಯನ ಅನೇಕ ಆರೋಗ್ಯ ಸಮಸ್ಯೆಗಳನ್ನು ನೀಗಿಸಲು ಬಳಸಲಾಗುತ್ತೆ.


ಶುಂಠಿ ಕಷಾಯವನ್ನು ಮೊದಲು ತಯಾರಿಸಲಾಗುತ್ತಿತ್ತು. ಈಗ ಶುಂಠಿ ಟೀ ಕುಡಿಯುವುದು ರೂಢಿ. ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಮೈಗ್ರೇನ್ ತಡೆಯುವ ಅಂಶವೂ ಶುಂಠಿಯಲ್ಲಿದೆ. ಶುಂಠಿಯಲ್ಲಿ ನಿಮ್ಮ ಆರೋಗ್ಯಕ್ಕೆ ಅನುವಾಗುವ ಅನೇಕ ಗುಣಗಳಿವೆ. ಅದೇನೆಂದು ಇಲ್ಲಿ ತಿಳಿಯಿರಿ.


ಶುಂಠಿಯಲ್ಲಿರುವ ಅಂಶ ಹೇಗೆ ಉಪಕಾರಿ?
* ಅಜೀರ್ಣಕ್ಕೆ ಮದ್ದು
* ಪಿತ್ತ, ವಾಕರಿಕೆ, ನೀಗಿಸುತ್ತದೆ.
* ಸಂಧಿವಾತಕ್ಕೆ ಪರಿಣಾಮಕಾರಿ
* ಮೈಗ್ರೇನ್ ಸಮಸ್ಯೆ ತಗ್ಗಿಸುತ್ತದೆ
* ತಲೆ ಸುತ್ತು ನಿವಾರಣೆ
* ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

No comments:

Post a Comment