Friday, October 21, 2011

ಕೊತ್ತಂಬರಿ

 

ಕೊತ್ತಂಬರಿ ಒಂದಲ್ಲಾ ಒಂದು ರೀತಿಯಲ್ಲಿ ದಿನನಿತ್ಯ ನಮ್ಮ ಆಹಾರದಲ್ಲಿ ಬಳಸುತ್ತಿರುತ್ತೇವೆ. ಆದರೆ ಅದರಲ್ಲಿರುವ ಆರೋಗ್ಯದ ಅಂಶದ ಬಗ್ಗೆ ಹಲವರಿಗೆ ಅರಿವಿರುವುದಿಲ್ಲ.


ಆಯುರ್ವೇದದಲ್ಲಿ ಧನ್ಯಕಾ ಎಂದು ಕರೆಯಲ್ಪಡುವ, ಧನಿಯಾ ಬೀಜದಿಂದ ಚಿಗುರುವ ಕೊತ್ತಂಬರಿ ಗಿಡದಿಂದ ಆರೋಗ್ಯಕ್ಕೆ ಅನನ್ಯ ಉಪಯೋಗವಿದೆ. ಧನಿಯಾ ಮತ್ತು ಕೊತ್ತಂಬರಿ ಎಲೆ, ಎರಡೂ ಕೂಡ ದೇಹಕ್ಕೆ ಹೆಚ್ಚು ಅವಶ್ಯಕ.


ಕೊತ್ತಂಬರಿ ಏಕೆ ಸೇವಿಸಬೇಕು?
* ಉರಿ ನಿವಾರಕ ಮತ್ತು ನೋವು ನಿವಾರಕವಾಗಿದೆ
* ಅಜೀರ್ಣ ನೀಗಿಸುತ್ತೆ
* ಕರುಳಿನಲ್ಲಿ ಬೇನೆ ಇದ್ದರೆ ಕೊತ್ತಂಬರಿ ಸೇವಿಸಬೇಕು.
* ಜ್ವರಕ್ಕೆ ಉಪಕಾರಿ
* ಶ್ವಾಸಕೋಶದ ಸೋಂಕು ಮತ್ತು ಅಲರ್ಜಿ ನೀಗಿಸುತ್ತದೆ.
* ಕೆಲವೊಮ್ಮೆ ದೇಹದಲ್ಲಿ ಖನಿಜಾಂಶ ಹೆಚ್ಚಾದರೂ ತೊಂದರೆ ತಪ್ಪಿದ್ದಲ್ಲ. ಆದ್ದರಿಂದ ಅಂತಹ ಸಮಯದಲ್ಲಿ ಕೊತ್ತಂಬರಿ ಸೊಪ್ಪಿನಿಂದ ದೇಹದಲ್ಲಿರುವ ಅತ್ಯಧಿಕ ಖನಿಜಾಂಶವನ್ನು ತೊಲಗಿಸಲು ಉಪಯೋಗಿಸಲಾಗುತ್ತದೆ.

No comments:

Post a Comment