Friday, October 21, 2011

ಬೆಳ್ಳುಳ್ಳಿ

ಕೇವಲ ಅಡುಗೆಗಷ್ಟೇ ಬೆಳ್ಳುಳ್ಳಿ ರುಚಿ ನೀಡುವುದಿಲ್ಲ, ಆರೋಗ್ಯಕ್ಕು ಇದು ಹೆಚ್ಚು ಅವಶ್ಯಕ. ಆಯುರ್ವೇದದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವ ಬೆಳ್ಳುಳ್ಳಿಯಲ್ಲಿ ಆರೋಗ್ಯದ ಗುಟ್ಟು ಹಲವಾರಿದೆ.

ಲಸುನ ಎಂದು ಆಯುರ್ವೇದದಲ್ಲಿ ಕರೆಯಲ್ಪಡುವ ಬೆಳ್ಳುಳ್ಳಿ ಮನುಷ್ಯನ ಆರೋಗ್ಯದ ಅವಶ್ಯಕತೆಗಳನ್ನು ಪೂರೈಸುತ್ತದೆ. ದೇಹವನ್ನು ಕಾಯಿಲೆಗೆ ದೂಡುವವೈರಸ್ , ಫಂಗಸ್, ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಪರಿಣಾಮಕಾರಿ ಗುಣಹೊದಿರುವ ಬೆಳ್ಳುಳ್ಳಿಯಲ್ಲಿ ಇನ್ನೂ ಅನೇಕ ಅಂಶಗಳಿವೆ.

ಬೆಳ್ಳುಳ್ಳಿ ಹೇಗೆ ಪರಿಣಾಮಕಾರಿ?
* ನೆಗಡಿ, ಕೆಮ್ಮಿಗೆ ಪರಿಣಾಮಕಾರಿ
* ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
* ವೈರಸ್, ಫಂಗಸ್ ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.
* ಹೃದಯದ ಸಮಸ್ಯೆ ದೂರಸರಿಸುತ್ತದೆ
* ಬೊಜ್ಜಿನ ಮಟ್ಟವನ್ನು ಕರಗಿಸುತ್ತದೆ.

ಇಷ್ಟಲ್ಲಾ ಆರೋಗ್ಯ ಗುಣಗಳನ್ನು ಹೊಂದಿರುವ ಈ ಬೆಳ್ಳುಳ್ಳಿಯ ನಿರಂತನ ಸೇವನೆ ಇದ್ದರೆ ಚಿಂತಿಸುವ ಅಗತ್ಯವಿಲ್ಲ.

No comments:

Post a Comment