ಹೇಳುವಾಗ ತಕ್ಷಣ ನೆನೆಪಾಗುವುದು ಹಸಿ ಸೊಪ್ಪು, ತರಕಾರಿಗಳು. ಆದರೆ
ಇವುಗಳಷ್ಟೆ ಕೆಂಪು ಬಣ್ಣದ ತರಕಾರಿಗಳು ತೂಕ ಇಳಿಸುವಲ್ಲಿ ಮತ್ತು
ಆರೋಗ್ಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ.
ಕೆಂಪು ತರಕಾರಿಯ ಗುಣಗಳ ಬಗ್ಗೆ ತಿಳಿಯೋಣ ಬನ್ನಿ.
1. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ: ಕೆಂಪು ಬಣ್ಣದ
ತರಕಾರಿಗಳಲ್ಲಿರುವ ಲೈಕೊಪೆನೆ ಕ್ಯಾನ್ಸರ್ ವಿರುದ್ಧ
ಹೋರಾಡುತ್ತದೆ. ಕೆಂಪು ತರಕಾರಿಗಳು ಗರ್ಭಕೋಶದ ಕ್ಯಾನ್ಸರ್ ವಿರುದ್ಧ
ಹೋರಾಡುತ್ತದೆ.
ಈ ಲೈಕೊಪೆನೆ
ಅಂಶ ಟೊಮೆಟೊದಲ್ಲಿ ಅಧಿಕವಾಗಿ ಕಂಡುಬರುತ್ತದೆ.
2. ರಕ್ತ ಹೀನತೆ ತಡೆಗಟ್ಟುವುದು: ಮಹಿಳೆಯರಲ್ಲಿ ಹೆಚ್ಚಾಗಿ
ಕಂಡುಬರುವ ಕಾಯಿಲೆ ರಕ್ತಹೀನತೆ. ಬೀಟ್ ರೂಟ್ಸ್ ನಲ್ಲಿರುವ ಕ್ಯಾರೋಟಿನ್ಸ್
ಮತ್ತು ಅಧಿಕ ಮ್ಯಾಗ್ನೆಸೆ ಅಂಶ ದೇಹದಲ್ಲಿ ರಕ್ತ
ಕಣಗಳು ಹೆಚ್ಚಾಗಲು ಸಹಕಾರಿಯಾಗಿದೆ.
3. ವಿಟಮಿನ್ ಗಳು: ಈ ಕೆಂಪು
ತರಕಾರಿಗಳಲ್ಲಿ ಅಧಿಕ ವಿಟಮಿನ್ ಸಿ ಮತ್ತು ವಿಟಮಿನ್ ಎ ಇದೆ. ಇದರಲ್ಲಿರುವ ಬೇಟಾ ಕ್ಯಾರೊಟಿನ್ ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡಲು
ಸಹಕಾರಿಯಾಗಿದೆ.
4. ಕ್ಯಾಲೋರಿ ಕಡಿಮೆ ಮಾಡುತ್ತೆ: ಈ ತರಕಾರಿಗಳಲ್ಲಿ
ಕ್ಯಾಲೋರಿ ಕಡಿಮೆ ಇದ್ದು ಇವುಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು.
No comments:
Post a Comment